ಮಂಗಳವಾರ ಎಸ್‌ಐಆರ್ ಅಂತಿಮ ಮತದಾರರ ಪಟ್ಟಿ ಪ್ರಕಟ

ಬೆಂಗಳೂರು: ಎಸ್ಐಆರ್ (SIR) ಅಂತಿಮ ಮತದಾರರ ಪಟ್ಟಿ ಮಂಗಳವಾರ (ಅ.27) ಪ್ರಕಟ ಆಗಲಿದ್ದು ಕರ್ನಾಟಕದಲ್ಲಿ ಒಂದು ಕೋಟಿ ಮತದಾರರ ಹೆಸರು ಡಿಲೀಟ್ ಆಗಲಿದೆ.

ಜೂನ್ 20ರಂದು ಭಾರತೀಯ ಚುನಾವಣಾ ಆಯೋಗವು ಹಮ್ಮಿಕೊಂಡಿದ್ದ ಈ ತೀವ್ರ ಪರಿಷ್ಕರಣೆ ಕಾರ್ಯದ ಆಕ್ಷೇಪಣೆಗಳ ಸಲ್ಲಿಕೆ ಹಾಗೂ ನೋಟಿಸ್ ವಿಲೇವಾರಿ ಪ್ರಕ್ರಿಯೆಯ ಅವಧಿಯು ಕೊನೆಗೊಂಡಿದೆ.

ಅನರ್ಹ ಮತದಾರರನ್ನ ಕೈ ಬಿಡುವ ಈ ಪ್ರಕ್ರಿಯೆ ಮುಕ್ತಾಯ ಆಗಿದ್ದು ನಾಳೆ ಅಂತಿಮ ಮತದಾರರ ಪಟ್ಟಿ ಪ್ರಕಟ ಆಗಲಿದೆ. ಆಗಸ್ಟ್ 24 ರಂದು ಕರುಡು ಮತದಾರರ ಪಟ್ಟಿ ಪ್ರಕಟ ಆಗಿತ್ತು.‌ ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳ ಅವಕಾಶ ನೀಡಲಾಗಿತ್ತು. ಈಗಾಗಲೇ ಲಕ್ಷಾಂತರ ಆಕ್ಷೇಪಣೆಗಳು ಸಲ್ಲಿಕೆ ಆಗಿವೆ. 43 ಲಕ್ಷ ಅನ್‌ಮ್ಯಾಪಿಂಗ್ ಮತ್ತು ಅನಾಮಧೇಯ ಮತದಾರರಿಗೆ ನೋಟಿಸ್ ನೀಡಿ ವಿಚಾರಣೆ ಕೂಡ ನಡೆಸಲಾಗಿದೆ.ಇದನ್ನೂ ಓದಿ: ರಿಲ್ಯಾಕ್ಸ್ ಮೂಡ್‌ನಲ್ಲಿ ಅಂಬಾರಿ ಹೊತ್ತ ಪ್ರಶಾಂತ – ದುಬಾರೆಯಲ್ಲಿ ರಾಜಗಾಂಭೀರ್ಯದ ಗಜರಾಜನಿಗೆ ಪ್ರವಾಸಿಗರು ಫಿದಾ

ಫಾರ 06, ಫಾರ 07 ಅಡಿ ಕೂಡ ಲಕ್ಷಾಂತರ ಅರ್ಜಿಗಳು ಸಲ್ಲಿಕೆ ಆಗಿವೆ. ಈಗ ಅಂತಿಮ ಮತದಾರರ ಪಟ್ಟಿ ಪ್ರಕಟಕ್ಕೆ ಕ್ಷಣಗಣನೆ ಶುರುವಾಗಿದೆ. ಅಕ್ಟೋಬರ್ 27ರಂದು ಪ್ರಕಟ ಆಗಲಿದೆ. ಒಟ್ಟು 5.54 ಕೋಟಿ ಮತದಾರರ ಪೈಕಿ ಕರಡು ಪಟ್ಟಿಯಲ್ಲಿ 4.46 ಕೋಟಿ ಮತದಾರರ ಹೆಸರು ಪ್ರಕಟ ಆಗಿತ್ತು. ಸುಮಾರು 1.7 ಕೋಟಿ ಮತದಾರರ ಹೆಸರನ್ನ ಕೈಬಿಡಲಾಗ್ತಿದೆ. ಬೆಂಗಳೂರಿನಲ್ಲಿ 57 ಲಕ್ಷ ‌ಮತದಾರರ ಹೆಸರು ಪ್ರಕಟ ಆಗಲಿದೆ. ಬೆಂಗಳೂರಿನಲ್ಲಿ ಸುಮಾರು 47 ಲಕ್ಷ ಮತದಾರರ‌ ಹೆಸರು ಡಿಲೀಟ್ ಆಗುವ ಸಾಧ್ಯತೆ ಇದೆ.ಇದನ್ನೂ ಓದಿ: ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ – ಆರೋಪಿ ಮೊಬೈಲ್‌ನಲ್ಲಿ ವಾಯ್ಸ್‌ ನೋಟ್‌ ಪತ್ತೆ

Leave a Reply

Your email address will not be published. Required fields are marked *

error: Content is protected !!